Respect Senior Care Rider: 9152007550 (Missed call)
Sales: 1800-209-0144
Service Chat: +91 75072 45858
Thank you for visiting our website.
For any assistance please call on 1800-209-0144
ಪಿಎಂಎಫ್‌ಬಿವೈ ಯೋಜನೆಯ ಅಡಿಯಲ್ಲಿ ಒಳಗೊಂಡ ಬೆಳೆಗಳು
ಪ್ರಮುಖ ಲಕ್ಷಣಗಳು
ಆಕ್ಚುರಿಯಲ್ ಪ್ರೀಮಿಯಂ ದರವನ್ನು (ಎಪಿಆರ್) ಪಿಎಂಎಫ್‌ಬಿವೈ ಅಡಿಯಲ್ಲಿ ಶುಲ್ಕವಿಧಿಸಲಾಗುತ್ತದೆ. ಈ ದರವನ್ನು ವಿಮೆ ಮಾಡಿದ ಮೊತ್ತದಲ್ಲಿ ಅನ್ವಯಿಸಲಾಗುತ್ತದೆ. ಈ ಯೋಜನೆಯಡಿ ರೈತರು ಪಾವತಿಸಬೇಕಾದ ಗರಿಷ್ಠ ಪ್ರೀಮಿಯಂ ದರವನ್ನು ಈ ಕೆಳಗಿನ ಕೋಷ್ಟಕವನ್ನು ಬಳಸಿಕೊಂಡು ನಿರ್ಧರಿಸಲಾಗುತ್ತದೆ:
ಸೀಸನ್ | ಬೆಳೆಗಳು | ರೈತ ಪಾವತಿಸಬೇಕಾದ ಗರಿಷ್ಠ ವಿಮಾ ಶುಲ್ಕಗಳು |
ಮುಂಗಾರು | ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳು | ವಿಮೆ ಮೊತ್ತದ2% |
ಹಿಂಗಾರು | ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳು | ವಿಮೆ ಮೊತ್ತದ 1.5% |
ಹಿಂಗಾರು ಮತ್ತು ಮುಂಗಾರು | ವಾರ್ಷಿಕ ವಾಣಿಜ್ಯ / ವಾರ್ಷಿಕ ತೋಟಗಾರಿಕಾ ಬೆಳೆಗಳು ದೀರ್ಘಕಾಲಿಕ ತೋಟಗಾರಿಕಾ ಬೆಳೆಗಳು (ಪೈಲಟ್ ಬೇಸಿಸ್) |
ವಿಮೆ ಮೊತ್ತದ 5% |
ಉಳಿದ ಪ್ರೀಮಿಯಂ ಅನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರವು ಸಮಾನವಾಗಿ ಪಾವತಿಸುತ್ತದೆ
ನಮ್ಮೊಂದಿಗೆ ಪ್ರಧಾನ್ ಮಂತ್ರಿ ಬಿಮಾ ಯೋಜನೆಗಾಗಿ, ಬಜಾಜ್ ಅಲಿಯಾನ್ಸ್‌ನಲ್ಲಿ ಹಕ್ಕು ಪ್ರಕ್ರಿಯೆಯು ತ್ವರಿತ ಮತ್ತು ಸುಲಭವಾಗಿದೆ.
ತಡೆಗಟ್ಟಿದ ಬಿತ್ತನೆಯಿಂದಾಗಿ ಉಂಟಾದನಷ್ಟವನ್ನು ವಿಮಾ ಕಂಪನಿಗೆತಿಳಿಸಲು ವಿಮೆ ಮಾಡಿದ ರೈತನ ಅಗತ್ಯವಿಲ್ಲ, ಏಕೆಂದರೆ ಇದು ವ್ಯಾಪಕ ವಿಪತ್ತು ಹಾಗೂಮೌಲ್ಯಮಾಪನವು ಪ್ರದೇಶದ ವಿಧಾನವನ್ನು ಆಧರಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಚ್ಚಿನ ರೈತರು ತಮ್ಮ ಬೆಳೆ ಬಿತ್ತಲು ಸಾಧ್ಯವಾಗದಿದ್ದಾಗ ಈ ಪ್ರಯೋಜನವನ್ನು ಪ್ರಚೋದಿಸಲಾಗುತ್ತದೆ. ವಿವರಗಳು ಕೆಳಕಂಡಂತಿವೆ:
ತಿಳಿಸಿದಪ್ರದೇಶದ ಮಿತಿ ಇಳುವರಿ (ಟಿವೈ) ಗೆ ಹೋಲಿಸಿದರೆ ವಿಮೆ ಮಾಡಿದ ಬೆಳೆಯ ಇಳುವರಿಯಲ್ಲಿನ ಕೊರತೆಯನ್ನು ಈ ಯೋಜನೆ ಪಾವತಿಸುತ್ತದೆ.
ಯಾವುದೇ ವ್ಯಾಪಕ ವಿಪತ್ತು ಅಥವಾ ಪ್ರತಿಕೂಲ ಋತುವಿನ ಸಂದರ್ಭದಲ್ಲಿ ರೈತರಿಗೆ ತಕ್ಷಣದ ಪರಿಹಾರವನ್ನು ನೀಡುವಯೋಜನೆಆಗಿದೆ, ಈಋತುವಿನಲ್ಲಿ ನಿರೀಕ್ಷಿತ ಇಳುವರಿ ಸಾಮಾನ್ಯ ಇಳುವರಿಯ 50%ಕ್ಕಿಂತ ಕಡಿಮೆಯಿರಬಹುದು.
ಪ್ರಸ್ತುತ ವರ್ಷ ನಾವು, ಕರ್ನಾಟಕ, ಛತ್ತೀಸ್ಗಢ್, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ರಾಜ್ಯಗಳಲ್ಲಿ PMFBY ಅನ್ನು ಜಾರಿಗೊಳಿಸುತ್ತಿದ್ದೇವೆ. ರಾಜಸ್ಥಾನ ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಿಗೆ ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ನಾವು ಜಾರಿಗೊಳಿಸುತ್ತಿದ್ದೇವೆ.
ಮುಂಗಾರು ಮತ್ತು ಹಿಂಗಾರು ಗಾಗಿ ನಮ್ಮಿಂದ ಸೇವೆ ಸಲ್ಲಿಸಲ್ಪಟ್ಟ ರಾಜ್ಯಗಳ ಮತ್ತು ಜಿಲ್ಲೆಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ವರ್ಷ | 2016 | 2017 | 2018 | 2019 | 2020 | 2021 | ಗ್ರ್ಯಾಂಡ್ ಟೋಟಲ್ |
ಮುಂಗಾರು | 1621058 | 2333669 | 1230908 | 3007435 | 2935539 | 3651937 | 14780546 |
ಹಿಂಗಾರು | 491316 | 3579654 | 5198862 | 1786654 | 1116715 | 2087870 | 14261071 |
ಒಟ್ಟು | 2112374 | 5913323 | 6429770 | 4794089 | 4052254 | 5739807 | 29041617 |
ದಿನಾಂಕದಂದು ಪರಿಹಾರಪಾವತಿ ಸಾರಾಂಶ: 30 ಜೂನ್ 2021
ರಾಜ್ಯ |
ಪಾವತಿಸಿದ ಪರಿಹಾರಗಳು (ಕೋಟಿಯಲ್ಲಿ ರೂ.) | ||||||
2016 | 2017 | 2018 | 2019 | 2020 | 2021 | ಗ್ರ್ಯಾಂಡ್ ಟೋಟಲ್ | |
ಆಂಧ್ರಪ್ರದೇಶ | 570.23 | 0.00 | 602.46 | 0.00 | 0.00 | 0.00 | 1172.68 |
ಅಸ್ಸಾಂ | 0.00 | 0.00 | 2.52 | 0.00 | 0.00 | 0.00 | 2.52 |
ಬಿಹಾರ | 164.25 | 0.00 | 0.00 | 0.00 | 0.00 | 0.00 | 164.25 |
ಛತ್ತೀಸ್ಗರ್ಹ್ | 17.50 | 48.76 | 236.11 | 29.03 | 87.82 | 51.35 | 470.57 |
ಗುಜರಾತ್ | 0.00 | 0.00 | 2.18 | 0.01 | 0.00 | 0.00 | 2.19 |
ಹರಿಯಾಣ | 134.11 | 363.41 | 0.00 | 138.19 | 140.43 | 205.30 | 981.44 |
ಜಾರ್ಖಂಡ್ | 0.00 | 0.00 | 50.98 | 0.00 | 0.00 | 0.00 | 50.98 |
ಕರ್ನಾಟಕ | 0.00 | 0.00 | 0.00 | 26.89 | 174.44 | 22.74 | 224.07 |
ಮಾಧ್ಯ ಪ್ರದೇಶ | 0.00 | 0.00 | 0.00 | 710.71 | 0.00 | 0.00 | 710.71 |
ಮಹಾರಾಷ್ಟ್ರ | 175.04 | 32.79 | 882.40 | 483.26 | 121.46 | 396.86 | 2091.81 |
ರಾಜಸ್ಥಾನ್ | 0.00 | 742.37 | 168.81 | 241.71 | 251.58 | 552.03 | 1956.50 |
ತೆಲಂಗಾಣ | 54.74 | 5.43 | 36.80 | 0.00 | 0.00 | 0.00 | 96.97 |
ಉತ್ತರ ಪ್ರದೇಶ | 0.00 | 58.49 | 18.22 | 26.53 | 0.00 | 0.00 | 103.24 |
ಉತ್ತರಾಖಂಡ್ | 0.00 | 0.00 | 0.08 | 0.00 | 0.00 | 0.00 | 0.08 |
ಗ್ರ್ಯಾಂಡ್ ಟೋಟಲ್ | 1115.86 | 1251.25 | 2000.57 | 1656.33 | 775.74 | 1228.27 | 8028.01 |
PMFBY ಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳಿದ್ದಲ್ಲಿ, ನೀವು ನಮ್ಮ ಫಾರ್ಮಿತ್ರ ಮೊಬೈಲ್ ಆಪ್ ಬಳಸಿ ನಮ್ಮನ್ನು ತಲುಪಬಹುದು ಅಥವಾ 1800-209-5959 ಗೆ ಕರೆ ಮಾಡಬಹುದು, ಅಥವಾ ಪರ್ಯಾಯವಾಗಿ ಕೆಳಗಿನ ಐಡಿಗಳಲ್ಲಿ ನಮಗೆ ಬರೆಯಬಹುದು:
ಶ್ರೀ ರವೀಂದ್ರ ಶರ್ಮಾ , ವರ್ಟಿಕಲ್ ಹೆಡ್ - ಕೃಷಿ ತಂತ್ರಜ್ಞಾನ ಯೋಜನೆಗಳು ಮತ್ತು ಗ್ರಾಹಕ ಅನುಭವ
Ravindra.Sharma@bajajallianz.co.in
ಶ್ರೀ ಅಂಜನಿ ಕುಮಾರ್ ರಾಯ್, ನ್ಯಾಷನಲ್ ಮ್ಯಾನೇಜರ್ - ಕೃಷಿ ವ್ಯವಹಾರ
ನಮ್ಮ ಜಿಲ್ಲಾ ಅಧಿಕಾರಿಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಹತ್ತಿರದ ಕೃಷಿ ವಿಮಾ ಕಚೇರಿಯ ವಿವರಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಶ್ರವಣ್ ಕುಮಾರ್ ಜಾಂಗ್ಹೀ
ಈ ವರ್ಷ ಅಪಾರವಾದ ಬಿರುಗಾಳಿ ಮಳೆಯಾಗಿದೆ, ಆದರೆ ಕೃತಜ್ಞತೆಯಿಂದ ನಾನು ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನಾ ಮತ್ತು ಃಂಉIಅ ನನ್ನ ಕ್ಲೇಮ್ಗಳನ್ನು ಪಾವತಿಸುವಲ್ಲಿ ಅದ್ಭುತ ಕೆಲಸ ಮಾಡಿದೆ. ಇದನ್ನು ತ್ವರಿತವಾಗಿ ಮತ್ತು ಜಗಳ ಮುಕ್ತ ರೀತಿಯಲ್ಲಿ ನೇರವಾಗಿ ನನ್ನ ಬ್ಯಾಂಕ್ ಖಾತೆಯಲ್ಲಿ ಇತ್ಯರ್ಥಪಡಿಸಲಾಗಿದೆ.
ಪ್ರೇಮ್ ಸಿಂಗ್ ಜಲೋರ್, ರಾಜಸ್ಥಾನ
ಟಿಎಟಿ ಒಳಗೆ ಪ್ರವಾಹಕ್ಕಾಗಿ ನಾನು ಫರ್ಮಿತ್ರಾದಲ್ಲಿ BAGIC ಗೆ ತಿಳಿಸಿದೆ. ಅವರ ಪ್ರತಿಕ್ರಿಯೆ ಬಹಳ ತ್ವರಿತವಾಗಿತ್ತು ಹಾಗೂ ಅವರು 5ನೇ ದಿನದಂದು ಸಮೀಕ್ಷೆಯನ್ನು ಮಾಡಿದ್ದಾರೆ.ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯಪ್ರತಿಕ್ರಿಯೆಯಿಂದ ನನಗೆ ತುಂಬಾ ಸಂತೋಷವಾಗಿದೆ.
ಪ್ರಶಾಂತ್ ದೇಶ್ಮುಖ್ ಹಿಂಗೋಲಿ, ಮಹಾರಾಷ್ಟ್ರ
ಈ ವಿವಿಧ ಕೃಷಿ ಅಪಾಯಗಳಿಂದ ನಿಜವಾಗಿಯೂ ರಕ್ಷಣೆ ಬಯಸುವ ನನ್ನಂತಹ ರೈತರಿಗೆ ಸಹಾಯ ಮಾಡಿದ್ದಕ್ಕಾಗಿ ಬಜಾಜ್ ಅಲಿಯಾನ್ಸ್ ಜಿಐಸಿ ಗೆ ಧನ್ಯವಾದಗಳು
ವಿಮೆ ದೊಡ್ಡ ಅನಿರೀಕ್ಷಿತ ನಷ್ಟವನ್ನು ಸಣ್ಣ ಸಂಭವನೀಯತೆಯೊಂದಿಗೆ ನಿಮ್ಮ ಮತ್ತು ನಿಮ್ಮ ಸ್ವತ್ತನ್ನು ರಕ್ಷಿಸುವ ಒಂದು ಸಾಧನವಾಗಿರುತ್ತದೆ. ವಿಮೆ ಹಣ ಸಂಪಾದಿಸುವ ಕೆಲಸವಲ್ಲ, ಆದರೆ ಹಣಕಾಸಿನ ಅನಾಹುತಗಳಿಗೆ ಕಾರಣವಾಗಬಹುದಾದ ಅನಿರೀಕ್ಷಿತ ನಷ್ಟಗಳಿಗೆ ವ್ಯಕ್ತಿ ಅಥವಾ ವ್ಯವಹಾರಗಳಿಗೆ ಪರಿಹಾರ ಒದಗಿಸಲು ಸಹಾಯಮಾಡುವುದಾಗಿರುತ್ತದೆ. ಮೂಲತಃ ಇದು ಜನರಿಗೆ ಅಪಾಯವನ್ನು ವರ್ಗಾವಣೆ ಮಾಡಲು ಮತ್ತು ಹಂಚಿಕೊಳ್ಳಲು ಒಂದು ವಿಧಾನವನ್ನು ಒದಗಿಸುವ ತಂತ್ರವಾಗಿದೆ, ಅಲ್ಲಿ ಕೆಲವರು ಅನುಭವಿಸುವ ನಷ್ಟಗಳನ್ನು ಅದೇ ರೀತಿಯ ಅಪಾಯಗಳಿಗೆ ಒಡ್ಡಿಕೊಳ್ಳುವ ಅನೇಕರು ಮಾಡುವ ಸಣ್ಣ ಕೊಡುಗೆಗಳ ಮೂಲಕ ಸಂಗ್ರಹಿಸಲಾದ ಮೊತ್ತದಿಂದ ಭರಪಾಯಿ ಮಾಡಲಾಗುತ್ತದೆ.
ಬೆಳೆ ವಿಮೆ ಒಂದು ವ್ಯವಸ್ಥೆಯಾಗಿದ್ದು ಇಲ್ಲಿ ರೈತರು ವಿವಿಧ ಉತ್ಪಾದನಾ ಅಪಾಯಗಳಿಂದಾಗಿ ತಮ್ಮ ಬೆಳೆ ನಷ್ಟ ಮತ್ತು ಬೆಳೆ ನಾಶದಿಂದಾಗಿ ಬಳಲುವ ಆರ್ಥಿಕ ಸಂಕಷ್ಟವನ್ನು ಕಡಿಮೆಗೊಳಿಸುವ ಗುರಿಹೊಂದಿರುತ್ತದೆ.
ಪ್ರಧಾನ್ ಮಂತ್ರಿ ಫಾಸಲ್ ಬೀಮಾ ಯೋಜನೆ (ಪಿಎಂಎಫ್‌ಬಿವೈ) ತಮ್ಮ ಬೆಳೆ ಉತ್ಪಾದನೆಯನ್ನು ನಿರ್ದಿಷ್ಟ ವಿಮಾ ಕಂಪನಿಗೆ ಪೂರ್ವನಿರ್ಧರಿತ ಮಟ್ಟದಲ್ಲಿ ವಿಮೆ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಹವಾಮಾನ ಆಧಾರಿತ ಬೆಳೆ ವಿಮೆಯು ಮಳೆ, ತಾಪಮಾನ, ಮಂಜು, ತೇವಾಂಶ, ಗಾಳಿಯ ವೇಗ, ಚಂಡಮಾರುತ ಮುಂತಾದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಬೆಳೆ ಹಾನಿಗೆ ಉಂಟಾಗುವ ಆರ್ಥಿಕ ಸಂಕಷ್ಟವನ್ನು ವಿಮೆ ಮಾಡಿದ ರೈತರಿಗೆ ತಗ್ಗಿಸುವ ಗುರಿಯನ್ನು ಹೊಂದಿದೆ.
ಇದು ನಿರ್ದಿಷ್ಟ ವಿಮಾ ಘಟಕದ ಪ್ರಮುಖ ಬೆಳೆಗಳನ್ನು ಒಳಗೊಳ್ಳುತ್ತದೆ ಉದಾ. a. ಆಹಾರ ಬೆಳೆಗಳಲ್ಲಿ ಸಿರಿಧಾನ್ಯಗಳು, ರಾಗಿ ಮತ್ತು ಬೇಳೆಕಾಳುಗಳು ಸೇರಿವೆ, b. ಎಣ್ಣೆಕಾಳುಗಳು ಮತ್ತು c.ವಾರ್ಷಿಕ ವಾಣಿಜ್ಯ / ತೋಟಗಾರಿಕಾ ಬೆಳೆಗಳು ಇತ್ಯಾದಿ.
a. ಸಾಲಗಾರ ಮತ್ತು ಸಾಲಗಾರರಲ್ಲದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ವಿಮೆ ಇಳಿಸುವ ಮೊತ್ತವು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯು ನಿರ್ಧರಿಸಿದ ಹಣಕಾಸು ಲೆಕ್ಕಾಚಾರಕ್ಕೆ ಏಕರೀತಿಯದಾಗಿರುತ್ತದೆ ಮತ್ತು ಸಮಾನವಾಗಿರುತ್ತದೆ ಮತ್ತು ಇದನ್ನು ಎಸ್‌ಎಲ್‌ಸಿಸಿಸಿಐ ಮೊದಲೇ ಘೋಷಿಸುತ್ತದೆ ಮತ್ತು ಅಧಿಸೂಚಿತಗೊಳಿಸಲಾಗುತ್ತದೆ. ಇತರ ಯಾವುದೇ ಲೆಕ್ಕಾಚಾರ ಅನ್ವಯವಾಗುವುದಿಲ್ಲ. ವೈಯಕ್ತಿಕ ರೈತರ ವಿಮೆ ಮೊತ್ತವು ಪ್ರತಿ ಹೆಕ್ಟೇರ್‌ಗೆ ಹಣಕಾಸು ಮಾಪಕಕ್ಕೆ ಸಮನಾಗಿರುತ್ತದೆ ಮತ್ತು ವಿಮೆ ಮಾಡಲು ರೈತನು ಪ್ರಸ್ತಾಪಿಸಿದ ಅಧಿಸೂಚಿತ ಬೆಳೆಯ ವಿಸ್ತೀರ್ಣದಿಂದ ಗುಣಿಸಲ್ಪಡುತ್ತದೆ. “ಸಾಗುವಳಿ ಪ್ರದೇಶವನ್ನು” ಯಾವಾಗಲೂ ‘ಹೆಕ್ಟೇರ್’ ನಲ್ಲಿಯೇ ತಿಳಿಸಬೇಕು. b. ವಿಮೆ ಮೊತ್ತವು ನೀರಾವರಿ ಮತ್ತು ನೀರಾವರಿ ಅಲ್ಲದ ಪ್ರದೇಶಗಳಿಗೆ ಬೇರೆಬೇರೆ ಆಗಿರಬಹುದು.
ಇದು ಬೆಳೆ ಜೀವನ ಚಕ್ರದ ಮೇಲೆ ಮತ್ತು ಸಂಬಂಧ ಪಟ್ಟ ರಾಜ್ಯ ಸರಕಾರಗಳ ಅಧಿಸೂಚನೆಯ ಮೇಲೆ ಅವಲಂಬಿತವಾಗಿರುತ್ತದೆ.
ಇದು ಬೆಳೆ ಜೀವನ ಚಕ್ರದ ಮೇಲೆ ಮತ್ತು ಸಂಬಂಧ ಪಟ್ಟ ರಾಜ್ಯ ಸರಕಾರಗಳ ಅಧಿಸೂಚನೆಯ ಮೇಲೆ ಅವಲಂಬಿತವಾಗಿರುತ್ತದೆ.
ಬೆಳೆ ವಿಮೆಯಲ್ಲಿ 12 ಕಂಪನಿಗಳು ಮುಂಚೂಣಿಯಲ್ಲಿದ್ದು ಅವುಗಳೆಂದರೆ:
i. ಕೃಷಿ ವಿಮಾ ಕಂಪನಿ
ii. ಚೋಳಮಂಡಲಂ ಎಂಎಸ್ ಜನರಲ್ ಇನ್ಶುರೆನ್ಸ್ ಕಂಪನಿ
iii. ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂ.ಲಿ
iv. ಬಜಾಜ್ಅಲಿಯಾನ್ಸ್ಅಲಿಯಾನ್ಜ್ಜನರಲ್ಇನ್ಶೂರೆನ್ಸ್ಕಂ. ಲಿಮಿಟೆಡ್.
v. ಫ್ಯೂಚರ್ ಜನರಲ್ ಇಂಡಿಯಾ ಇನ್ಶುರೆನ್ಸ್ ಕಂ.ಲಿ.
vi. ಎಚ್‌ಡಿಎಫ್‌ಸಿ ಇಆರ್‌ಜಿಒ ಜನರಲ್ ಇನ್ಶುರೆನ್ಸ್ ಕಂ.
vii. ಇಫ್ಕೊ ಟೋಕಿಯೊ ಜನರಲ್ ಇನ್ಶುರೆನ್ಸ್ ಕಂ.
viii. ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿ
ix. ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂ.
x. ಟಾಟಾ ಎಐಜಿ ಜನರಲ್ ಇನ್ಶುರೆನ್ಸ್ ಕಂ ಲಿಮಿಟೆಡ್.
xi. ಎಸ್.ಬಿ.ಐ.ಸಾಮಾನ್ಯವಿಮೆ
xii. ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂ.
ಅನುಷ್ಟಾನಗೊಳಿಸುವ ಏಜನ್ಸಿ (ಐಎ) ಮೂಲಕ ಪಿಎಂಎಫ್‌ಬಿವೈ ಅಡಿಯಲ್ಲಿ ವಾಸ್ತವಿಕ ಪ್ರೀಮಿಯಂ ದರವನ್ನು (ಎಪಿಆರ್) ಚಾರ್ಜ್ ಮಾಡಲಾಗುತ್ತದೆ. ರೈತರಿಂದ ಪಾವತಿಸಬೇಕಾದ ವಿಮೆ ಶುಲ್ಕ ದರ ಈ ಕೆಳಗಿನ ಕೋಷ್ಟಕದ ಪ್ರಕಾರ ಇರುತ್ತದೆ:
ಮುಂಗಾರು/ಹಿಂಗಾರು | ಬೆಳೆಗಳು | ರೈತನಿಂದ ಪಾವತಿಸಬೇಕಾದ ಗರಿಷ್ಟ ಶುಲ್ಕಗಳು (ವಿಮೆ ಮೊತ್ತದ %) |
---|---|---|
ಮುಂಗಾರು | ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆ ಬೀಜಗಳು (ಸಿರಿಧಾನ್ಯಗಳು, ಕಾಳು, ಬೇಳೆಕಾಳುಗಳು ಮತ್ತು ಎಣ್ಣೆ ಬೀಜಗಳು) | ಎಸ್.ಐ.ನ 2.0% ಅಥವಾ ವಾಸ್ತವಿಕ ದರ, ಯಾವುದು ಕಡಿಮೆಯೋ ಅದು |
ಹಿಂಗಾರು | ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆ ಬೀಜಗಳು (ಸಿರಿಧಾನ್ಯಗಳು, ಕಾಳು, ಬೇಳೆಕಾಳುಗಳು ಮತ್ತು ಎಣ್ಣೆ ಬೀಜಗಳು) | ಎಸ್.ಐ.ನ 1.5% ಅಥವಾ ವಾಸ್ತವಿಕ ದರ, ಯಾವುದು ಕಡಿಮೆಯೋ ಅದು |
ಹಿಂಗಾರು ಮತ್ತು ಮುಂಗಾರು | ವಾರ್ಷಿಕ ವಾಣಿಜ್ಯ/ವಾರ್ಷಿಕ ತೋಟಗಾರಿಕೆ ಬೆಳೆಗಳು | ಎಸ್.ಐ.ನ 5% ಅಥವಾ ವಾಸ್ತವಿಕ ದರ, ಯಾವುದು ಕಡಿಮೆಯೋ ಅದು |
ಅಪಾಯಗಳು : ಬೆಳೆ ನಷ್ಟಕ್ಕೆ ಕಾರಣವಾಗುವ ಕೆಳಗಿನ ಅಪಾಯಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗುತ್ತದೆ:-
a. ಇಳುವರಿ ನಷ್ಟಗಳು (ಎದ್ದು ನಿಲ್ಲುವ ಬೆಳೆಗಳು, ಸೂಚಿತ ಪ್ರದೇಶದ ಆಧಾರದ ಮೇಲೆ): ತಡೆಗಟ್ಟಲಾಗದ ಅಪಾಯಗಳಿಂದಾಗಿ ಇಳುವರಿ ನಷ್ಟವನ್ನು ಸರಿದೂಗಿಸಲು ಸಮಗ್ರ ಅಪಾಯ ವಿಮೆಯನ್ನು ಒದಗಿಸಲಾಗಿದೆ. ಉದಾ: (I) ನೈಸರ್ಗಿಕ ಬೆಂಕಿ ಮತ್ತು ಮಿಂಚು (ii) ಬಿರುಗಾಳಿ, ಆಲಿಕಲ್ಲುಮಳೆ, ಚಂಡಮಾರುತ, ಭೀಕರಗಾಳಿ, ಸುಂಟರಗಾಳಿ, ಬಿರುಗಾಳಿ ಮಳೆ, ತೂಫಾನು ಮುಂತಾದವು. (Iii) ಪ್ರವಾಹ, ಜಲಾವರಾಣ ಮತ್ತು ಭೂಕುಸಿತ (iv) ಬರ (v) ಕೀಟಗಳು / ರೋಗಗಳು ಇತ್ಯಾದಿ.
b. ಬಿತ್ತನೆ ತಡೆಗಟ್ಟಿದಲ್ಲಿ (ಸೂಚಿತ ಪ್ರದೇಶದ ಆಧಾರದ ಮೇಲೆ):- ಅಧಿಸೂಚಿತ ಪ್ರದೇಶದ ವಿಮೆ ಇಳಿಸಿದ ಹೆಚ್ಚಿನ ಪ್ರಮಾಣದ ರೈತರು, ಬಿತ್ತನೆ/ನಾಟಿ ಮಾಡುವ ಉದ್ದೇಶ ಹೊಂದಿದ್ದು ಮತ್ತು ಈ ಉದ್ದೇಶಕ್ಕಾಗಿ ಖರ್ಚುವೆಚ್ಚ ಮಾಡಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವಿಮೆ ಇಳಿಸಿದ ಬೆಳೆಯನ್ನು ಬಿತ್ತನೆ/ನಾಟಿ ಮಾಡಲು ಆಗದಿದ್ದಲ್ಲಿ, ಅಂತಹ ರೈತರು ವಿಮೆ ಇಳಿಸಿದ ಮೊತ್ತದ ಗರಿಷ್ಟ 25% ನಷ್ಟು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.
c. ಕಟಾವು ನಂತರದ ನಷ್ಟಗಳು (ವೈಯಕ್ತಿಕ ಕೃಷಿ ಆಧಾರಿತ): ಕೊಯ್ಲು ಮಾಡಿದ ನಂತರ ಒಣಗಲು "ಕತ್ತರಿಸಿ ಹರಡಲಾದ" ಬೆಳೆಗಳಿಗೆ ಚಂಡಮಾರುತ/ಭೀಕರಗಾಳಿ ಮತ್ತು ಮಳೆ, ಅವಕಾಳಿ ಮಳೆಗಳಂತಹ ನಿರ್ಧಿಷ್ಟ ಅಪಾಯಗಳಿಗೆ ಕೊಯ್ಲು ಮಾಡಿದ 14 ದಿನಗಳ ಗರಿಷ್ಟ ಅವಧಿಗೆ ಕವರೇಜ್ ಲಭ್ಯವಾಗುತ್ತದೆ.
d. ಸ್ಥಳೀಯ ವಿಪತ್ತುಗಳು (ವೈಯಕ್ತಿಕ ಕೃಷಿ ಆಧಾರಿತ): ಗುರುತಿಸಲಾದ ಸ್ಥಳೀಕರಿಸಿದ ಅಪಾಯಗಳ ಕಾರಣಗಳಿಂದ ಉಂಟಾಗುವ ನಷ್ಟ/ಹಾನಿ, ಅಂದರೆ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಅಧಿಸೂಚಿತ ಪ್ರದೇಶದಲ್ಲಿ ಪ್ರವಾಹಗಳಿಂದಾಗಿ ಕೃಷಿ ಭೂಮಿಯನ್ನು ಪ್ರತ್ಯೇಕಿಸುವುದು.
ಹೊರಗಿಡುವಿಕೆಗಳು : ಕೆಳ ಕಾಣಿಸಿದ ಆಪತ್ತುಗಳಿಂದ ಉಂಟಾಗುವ ಅಪಾಯಗಳನ್ನು ಮತ್ತು ನಷ್ಟಗಳನ್ನು ಹೊರಗಿರಿಸಲಾಗುತ್ತದೆ: - ಯುದ್ಧ ಮತ್ತು ಸಂಬಂಧಿತ ಅಪಾಯಗಳು, ಪರಮಾಣು ಅಪಾಯಗಳು, ಗಲಭೆಗಳು, ದುರುದ್ದೇಶಪೂರಿತ ಹಾನಿ, ಕಳ್ಳತನ, ದ್ವೇಷ ಸಾಧಿಸುವ ಕ್ರಿಯೆ, ಸಾಕುಪ್ರಾಣಿ ಮತ್ತು / ಅಥವಾ ಕಾಡು ಪ್ರಾಣಿಗಳಿಂದ ಮೇಯುವುದು ಮತ್ತು/ಅಥವಾ ನಾಶವಾಗುವುದು, ಕೊಯ್ಲು ಮಾಡಿದ ನಂತರ ಉಂಟಾಗುವ ನಷ್ಟದ ಪ್ರಸಂಗದಲ್ಲಿ ಕೊಯ್ಲು ಮಾಡಿದ ಬೆಳೆಯನ್ನು ಕಾಳು ಬಡಿಯುವ ಮೊದಲು ಒಂದು ಸ್ಥಳದಲ್ಲಿ ಗಂಟು ಕಟ್ಟಿ ಪೇರಿಸಿಡುವುದು, ಇತರ ತಡೆಗಟ್ಟಬಹುದಾದ ಅಪಾಯಗಳು.
Disclaimer
I hereby authorize Bajaj Allianz General Insurance Co. Ltd. to call me on the contact number made available by me on the website with a specific request to call back at a convenient time. I further declare that, irrespective of my contact number being registered on National Customer Preference Register (NCPR) under either Fully or Partially Blocked category, any call made or SMS sent in response to my request shall not be construed as an Unsolicited Commercial Communication even though the content of the call may be for the purposes of explaining various insurance products and services or solicitation and procurement of insurance business. Furthermore, I understand that these calls will be recorded & monitored for quality & training purposes, and may be made available to me if required.
Please enter valid quote reference ID